ಮಾತೆ ಮರಿಯಳ ಜಪಸರ


ಜಪಸರ ಹೇಳುವ ವಿಧಾನ

ಶಿಲುಬೆಯ ಗುರುತು - ಪ್ರೇಷಿತರ ವಿಶ್ವಾಸ ಸಂಗ್ರಹ -

ಪರಲೋಕ ಪ್ರಾರ್ಥನೆ - ನಮೋ ಮರಿಯ ಪ್ರಾರ್ಥನೆ - 

ಪರಮತ್ರಿತ್ವಕ್ಕೆ ಸ್ತೋತ್ರದ ನಂತರ ಆಯಾ ದಿನದ ರಹಸ್ಯಗಳನ್ನು ಧ್ಯಾನಿಸುವುದು.

ಪ್ರತಿ ರಹಸ್ಯದ ಕೊನೆಯಲ್ಲಿ: ಓ ನನ್ನ ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿರಿನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ. ಎಲ್ಲಾ ಆತ್ಮಗಳನ್ನು, ವಿಶೇಷವಾಗಿ ನಿಮ್ಮ ದಯೆಯ ಅಗತ್ಯವಿರುವ ಆತ್ಮಗಳನ್ನು ಮೋಕ್ಷರಾಜ್ಯಕ್ಕೆ ಸೇರಿಸಿಕೊಳ್ಳಿರಿ.”

ಸಂತೋಷದ ರಹಸ್ಯಗಳು (ಸೋಮವಾರಶನಿವಾರ)

  1. ಗಾಬ್ರಿಯೆಲ್‍ ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಹೇಳಿದನು.
  2. ದೇವಮಾತೆ ಸಂತ ಎಲಿಜಬೇತಮ್ಮನನ್ನು ಸಂಧಿಸಿದರು.
  3. ಯೇಸುಸ್ವಾಮಿ ದನದ ಕೊಟ್ಟಿಗೆಯಲ್ಲಿ ಜನಿಸಿದರು.
  4. ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದರು.
  5. ಮೂರು ದಿನ ಕಾಣದೇ ಹೋದ ಯೇಸುಬಾಲರು ದೇವಾಲಯದಲ್ಲಿ ಮಾತಾಪಿತೃಗಳಿಗೆ ಸಿಕ್ಕಿದರು.

 

ಜ್ಯೋತಿಯ ರಹಸ್ಯಗಳು (ಗುರುವಾರ)

  1. ಯೇಸುಸ್ವಾಮಿ ಜೋರ್ಡಾನ್‍ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದರು.
  2. ಕಾನಾ ಊರಿನ ಮದುವೆಯಲ್ಲಿ ಯೇಸು ಮೊದಲ ಸೂಚಕ ಕಾರ್ಯವನ್ನು ಮಾಡಿದರು.
  3. ಯೇಸುಸ್ವಾಮಿ ದೇವರರಾಜ್ಯವನ್ನು ಘೋಷಿಸಿದರು.
  4. ಯೇಸುಸ್ವಾಮಿ ರೂಪಾಂತರ ಹೊಂದಿದರು.
  5. ಕಡೆಯ ಭೋಜನದ ಸಮಯದಲ್ಲಿ ಯೇಸುಸ್ವಾಮಿ ಪರಮಪ್ರಸಾದವನ್ನು ಸ್ಥಾಪಿಸಿದರು.


ದುಃಖದ ರಹಸ್ಯಗಳು (ಮಂಗಳವಾರ, ಶುಕ್ರವಾರ)

  1. ಯೇಸುಸ್ವಾಮಿ ಗೆತ್ಸೆಮನಿ ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು.
  2. ಯೇಸುವನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಚಾಟಿಗಳಿಂದ ಹೊಡೆದರು.
  3. ಯೇಸುವಿನ ಶಿರಸ್ಸಿಗೆ ಮುಳ್ಳಿನ ಕಿರಿಟವನ್ನು ತೊಡಿಸಿದರು.
  4. ಯೇಸುಸ್ವಾಮಿ ಶಿಲುಬೆಯನ್ನು ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು.
  5. ಯೇಸುಸ್ವಾಮಿ ಶಿಲುಬೆಯ ಮೇಲೆ ನಮಗಾಗಿ ಪ್ರಾಣಾರ್ಪಣೆ ಮಾಡಿದರು.

 

ಮಹಿಮೆಯ ರಹಸ್ಯಗಳು (ಬುಧವಾರಭಾನುವಾರ)

  1. ಮೃತರಾದ ಯೇಸು ಮೂರನೇ ದಿನ ಪುನರುತ್ಥಾನರಾದರು.
  2. ಪುನರುತ್ಥಾನದ ನಂತರ ನಲ್ವತ್ತನೇ ದಿನ ಯೇಸು ಮೋಕ್ಷಕ್ಕೆ ಆರೋಹಣರಾದರು.
  3. ಪವಿತ್ರಾತ್ಮರು ಪ್ರೇಷಿತರ ಮೇಲೆ ಇಳಿದು ಬಂದರು.
  4. ದೇವಮಾತೆಯು ಸ್ವರ್ಗಸ್ವೀಕೃತರಾದರು.
  5. ದೇವಮಾತೆಯು ಸ್ವರ್ಗದ ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟಧಾರಿಣಿಯಾದರು.

 

ನಮೋ ರಾಣಿಯೇ ಪ್ರಾರ್ಥನೆ

ನಮೋ ರಾಣಿಯೇದಯೆಯ ತಾಯಿಯೇನಮ್ಮ ಜೀವವೇಮಾಧುರ್ಯವೇ ಮತ್ತು ನಂಬಿಕೆಯೇ. ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತೇವೆ. ಆದುದರಿಂದನಮ್ಮ ಆಶ್ರಯವೇನಿಮ್ಮ ಕೃಪಾಕಟಾಕ್ಷವನ್ನು ನಮ್ಮ ಮೇಲೆ ಇಡಿರಿ. ಮತ್ತು ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯ ಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾಪರಿಯೇಪ್ರೀತಿಮಯಿಯೇಮಧುರ ಕನ್ಯಾಮರಿಯಾ.

ಶ್ಲೋಕ: ಪ್ರಭುವಿನ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ

ಪ್ರತಿಶ್ಲೋಕ: ಪರಿಶುದ್ಧ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ

ಸರ್ವಶಕ್ತರೂ ನಿತ್ಯರೂ ಆಗಿರುವ ಸರ್ವೇಶ್ವರಾಮಹಿಮಾಭರಿತ ಕನ್ಯಾಮರಿಯಮ್ಮನವರ ಆತ್ಮವನ್ನೂ ಶರೀರವನ್ನೂ ಪವಿತ್ರಾತ್ಮರ ಸಹಾಯದಿಂದ ನಿಮ್ಮ ಪುತ್ರರಿಗೆ ಯೋಗ್ಯವಾದ ವಾಸಸ್ಥಾನವನ್ನಾಗಿ ಮಾಡಿದಿರಿ. ಅಂತಹ ಪರಿಶುದ್ಧ ಮಾತೆಯನ್ನು ಸಂತೋಷದಿಂದ ಸ್ಮರಿಸಿಕೊಳ್ಳುವ ನಮ್ಮನ್ನುಅವರ ದಯಾಪರ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದಲೂ ನಿತ್ಯ ಮರಣದಿಂದಲೂ ರಕ್ಷಿಸಬೇಕೆಂದು ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆಆಮೆನ್‍.


ಮಾತೆಯ ಮನವಿಮಾಲೆ

ಪ್ರಭು ದಯೆತೋರಿ

ಕ್ರಿಸ್ತರೇ ದಯೆತೋರಿ

ಪ್ರಭು ದಯೆತೋರಿ

ಕ್ರಿಸ್ತರೇ ನಮ್ಮನ್ನು ಆಲೈಸಿರಿ

ಕ್ರಿಸ್ರರೇ ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ

ಪರಲೋಕದ ಪಿತದೇವರೇ               ನಮಗೆ ದಯೆತೋರಿ
ಲೋಕರಕ್ಷಕರಾದ ಸುತದೇವರೇ            ನಮಗೆ ದಯೆತೋರಿ
ಪವಿತ್ರಾತ್ಮ ದೇವರೇ                     ನಮಗೆ ದಯೆತೋರಿ
ಪರಮತ್ರಿತ್ವ ಏಕದೇವರೇ                 ನಮಗೆ ದಯೆತೋರಿ

ಸಂತ ಮರಿಯಮ್ಮನವರೇನಮಗಾಗಿ ಪ್ರಾರ್ಥಿಸಿರಿ.

ದೇವರ ಪರಿಶುದ್ಧ ತಾಯೇನಮಗಾಗಿ ಪ್ರಾರ್ಥಿಸಿರಿ.

ಕನ್ನಿಕೆಯರಲ್ಲಿ ಮಹಾ ಪರಿಶುದ್ಧ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ಕ್ರಿಸ್ತರ ತಾಯೇನಮಗಾಗಿ ಪ್ರಾರ್ಥಿಸಿರಿ.

ಧರ್ಮಸಭೆಯ ತಾಯೇನಮಗಾಗಿ ಪ್ರಾರ್ಥಿಸಿರಿ.

ದಯೆಯ ತಾಯೇನಮಗಾಗಿ ಪ್ರಾರ್ಥಿಸಿರಿ

ದೇವಪ್ರಸಾದದ ತಾಯೇನಮಗಾಗಿ ಪ್ರಾರ್ಥಿಸಿರಿ.

ನಂಬಿಕೆಯ ತಾಯೇನಮಗಾಗಿ ಪ್ರಾರ್ಥಿಸಿರಿ

ಅತಿ ಪರಿಶುದ್ಧ ತಾಯೇನಮಗಾಗಿ ಪ್ರಾರ್ಥಿಸಿರಿ.

ಅತಿ ವಿರಕ್ತಳಾದ ತಾಯೇನಮಗಾಗಿ ಪ್ರಾರ್ಥಿಸಿರಿ.

ನಿರ್ಮಲವಾದ ತಾಯೇನಮಗಾಗಿ ಪ್ರಾರ್ಥಿಸಿರಿ.

ಕನ್ಯತ್ವವನ್ನು ಕುಂದಿಸದ ತಾಯೇನಮಗಾಗಿ ಪ್ರಾರ್ಥಿಸಿರಿ.

ಪ್ರೀತಿಗೆ ಪಾತ್ರಳಾದ ತಾಯೇನಮಗಾಗಿ ಪ್ರಾರ್ಥಿಸಿರಿ.

ಆಶ್ಚರ್ಯಕರ ತಾಯೇನಮಗಾಗಿ ಪ್ರಾರ್ಥಿಸಿರಿ.

ಒಳ್ಳೆಯ ಆಲೋಚನೆಯ ತಾಯೇನಮಗಾಗಿ ಪ್ರಾರ್ಥಿಸಿರಿ.

ಸೃಷ್ಟಿಕರ್ತರ ತಾಯೇನಮಗಾಗಿ ಪ್ರಾರ್ಥಿಸಿರಿ.

ರಕ್ಷಕರ ತಾಯೇನಮಗಾಗಿ ಪ್ರಾರ್ಥಿಸಿರಿ.

ಅತಿ ಬುದ್ದಿವಂತೆಯಾದ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ಪೂಜ್ಯಳಾದ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ಸ್ತುತ್ಯಳಾದ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ಶಕ್ತಿಯುಳ್ಳ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ದಯಾಮಯ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ಪ್ರಾಮಾಣಿಕ ಕನ್ನಿಕೆಯೇನಮಗಾಗಿ ಪ್ರಾರ್ಥಿಸಿರಿ.

ನೀತಿಯ ಕನ್ನಡಿಯೇನಮಗಾಗಿ ಪ್ರಾರ್ಥಿಸಿರಿ.

ಜ್ಞಾನದ ಪೀಠವೇನಮಗಾಗಿ ಪ್ರಾರ್ಥಿಸಿರಿ.

ನಮ್ಮ ಸಂತೋಷದ ಬುಗ್ಗೆಯೇನಮಗಾಗಿ ಪ್ರಾರ್ಥಿಸಿರಿ.

ಆಧ್ಯಾತ್ಮಿಕ ಪಾತ್ರೆಯೇನಮಗಾಗಿ ಪ್ರಾರ್ಥಿಸಿರಿ.

ಮಹಿಮಾಭರಿತ ಪಾತ್ರೆಯೇನಮಗಾಗಿ ಪ್ರಾರ್ಥಿಸಿರಿ.

ಅತ್ಯಂತ ಭಕ್ತಿಯುಳ್ಳ ಪಾತ್ರೆಯೇನಮಗಾಗಿ ಪ್ರಾರ್ಥಿಸಿರಿ.

ಗಹನವಾದ ರೋಜಾ ಪುಷ್ಪವೇನಮಗಾಗಿ ಪ್ರಾರ್ಥಿಸಿರಿ.

ಚಿನ್ನದ ಆಲಯವೇನಮಗಾಗಿ ಪ್ರಾರ್ಥಿಸಿರಿ.

ದಾವೀದನ ಉಪ್ಪರಿಗೆಯೇನಮಗಾಗಿ ಪ್ರಾರ್ಥಿಸಿರಿ.

ದಂತದ ಉಪ್ಪರಿಗೆಯೇನಮಗಾಗಿ ಪ್ರಾರ್ಥಿಸಿರಿ.

ಒಡಂಬಡಿಕೆಯ ಪೆಟ್ಟಿಗೆಯೇನಮಗಾಗಿ ಪ್ರಾರ್ಥಿಸಿರಿ.

ಮೋಕ್ಷದ ಬಾಗಿಲೇ ನಮಗಾಗಿ ಪ್ರಾರ್ಥಿಸಿರಿ.

ಉದಯ ಕಾಲದ ನಕ್ಷತ್ರವೇನಮಗಾಗಿ ಪ್ರಾರ್ಥಿಸಿರಿ.

ವ್ಯಾಧಿಸ್ಥರಿಗೆ ಆರೋಗ್ಯವೇನಮಗಾಗಿ ಪ್ರಾರ್ಥಿಸಿರಿ.

ಪಾಪಿಗಳಿಗೆ ಶರಣೇನಮಗಾಗಿ ಪ್ರಾರ್ಥಿಸಿರಿ.

ವಲಸಿಗರ ಸಾಂತ್ವನವೇನಮಗಾಗಿ ಪ್ರಾರ್ಥಿಸಿರಿ

ಕಷ್ಟಪಡುವವರಿಗೆ ಉಪಶಮನವೇನಮಗಾಗಿ ಪ್ರಾರ್ಥಿಸಿರಿ.

ಕ್ರೈಸ್ತರಿಗೆ ಸಹಾಯವೇನಮಗಾಗಿ ಪ್ರಾರ್ಥಿಸಿರಿ.

ದೇವದೂತರ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಪಿತಾಪಿತೃರ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಪ್ರವಾದಿಗಳ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಪ್ರೇಷಿತರ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ರಕ್ತಸಾಕ್ಷಿಗಳ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಧರ್ಮಸಾಕ್ಷಿಗಳ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಕನ್ನಿಕೆಯರ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಸಕಲ ಸಂತರ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಜನ್ಮ ಪಾಪವಿಲ್ಲದೆ ಉದ್ಭವಿಸಿದ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಸ್ವರ್ಗರೋಹಣವಾದ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಜಪಮಾಲೆಯ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಕುಟುಂಬಗಳ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

ಸಮಾಧಾನದ ರಾಣಿಯೇನಮಗಾಗಿ ಪ್ರಾರ್ಥಿಸಿರಿ.

 

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇನಮ್ಮನ್ನು ಕ್ಷಮಿಸಿರಿಪ್ರಭೂ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ ಪ್ರಭೂ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇನಮಗೆ ದಯೆತೋರಿ ಪ್ರಭೂ

 

ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ,

ಪರಿಶುದ್ಧ ದೇವಮಾತೆಯೇನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ:

ಪ್ರಭುವಾದ ದೇವರೇಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವಂತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ, ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23