ದೈವಿಕ ಕರುಣೆಯ ಜಪಮಾಲೆ
ಪ್ರಾರಂಭ ಪ್ರಾರ್ಥನೆ ಯೇಸುವೇ ನೀವು ಮರಣ ಹೊಂದಿದಿರಿ, ಆದರೆ ಆತ್ಮಗಳಿಗೆ ಜೀವದ ಚಿಲುಮೆ ಚಿಮ್ಮಿ ಹರಿಯಿತು; ಕರುಣೆಯ ಸಾಗರ ಇಡೀ ಜಗತ್ತಿಗೆ ತೆರೆದುಕೊಂಡಿತು. ಓ ಜೀವದ ಬುಗ್ಗೆಯೇ, ಓ ಅಗಾಧ ದೈವಿಕ ಕರುಣೆಯೇ, ಇಡೀ ಜಗತ್ತನ್ನು ಆವರಿಸಿ ನಮ್ಮನ್ನು ನಿಮ್ಮಲ್ಲಿ ಮುಳುಗಿಸಿರಿ. ನ ಮಗೋಸ್ಕರ ಹೊನಲಾಗಿ, ಯೇಸುವಿನ ಹೃದಯದಿಂದ ಹೊರಬಂದ, ಓ ರಕ್ತ ಮತ್ತು ಜಲವೇ, ನಾನು ನಿಮ್ಮನ್ನು ವಿಶ್ವಾಸಿಸುತ್ತೇನೆ. (3 ಬಾರಿ) ಜಪಸರ ಹೇಳುವ ವಿಧಾನ ಶಿಲುಬೆಯ ಗುರುತು - 1 ಪರಲೋಕ ಪ್ರಾರ್ಥನೆ - 1 ನಮೋ ಮರಿಯ ಪ್ರಾರ್ಥನೆ - ಪ್ರೇಷಿತರ ವಿಶ್ವಾಸ ಸಂಗ್ರಹ - ದೊಡ್ಡ ಮಣಿಯಲ್ಲಿ ಅನಂತ ಪಿತನೇ, ನಿಮ್ಮ ಪ್ರೀತಿಯ ಪುತ್ರರೂ ನಮ್ಮ ಪ್ರಭು ವೂ ಆದ ಯೇಸುಕ್ರಿಸ್ತರ ಪೂಜ್ಯ ಶರೀರ ಮತ್ತು ರಕ್ತ , ಆತ್ಮ ಮತ್ತು ದೈವತ್ವವನ್ನು, ನಮ್ಮ ಮತ್ತು ಇಡೀ ಲೋಕದ ಎಲ್ಲರ ಪಾಪ ಪರಿಹಾರಕ್ಕಾಗಿ ನಿಮಗೆ ಸಮರ್ಪಿಸುತ್ತೇವೆ. ಚಿಕ್ಕಮಣಿಗಳಲ್ಲಿ ಅಪ್ಪಾ ಪಿತನೇ , ಯೇಸುವಿನ ಅತಿ ದಾರುಣವಾದ ಶಿಲುಬೆ ಯಾತನೆ ಮತ್ತು ಮರಣದ ಫಲವಾಗಿ ನಮ್ಮ ಮೇಲೆಯೂ ಇಡೀ ಭೂಲೋಕದ ಮೇಲೆಯೂ ಕರುಣೆ ತೋರಿರಿ. ಹತ್ತು ಮಣಿಗಳ ನಂತರ ಪರಿಶುದ್ಧರು, ಸರ್ವಶಕ್ತರೂ ಚಿರಂಜೀವಿಯೂ ಆದ ನಿತ್ಯ ದೇವರೇ ನಮ್ಮ ಮೇಲೂ ಇಡೀ ಲೋಕದ ಮೇಲೂ ಕರುಣೆ ತೋರಿರಿ ( 3 ಬಾರಿ) ಅಂತಿಮ ಪ್ರಾರ್ಥನೆ ಕೊನೆಯಿಲ್ಲದ ದಯೆ ಮತ್ತು ಅಕ್ಷಯವಾದ ಕರುಣೆಯ ನಿಧಿಯಾಗಿರುವ ಅನಂತ ಸರ್ವೇಶ್ವರಾ, ನಮ್ಮನ್ನು ದಯೆಯಿಂದ ಈಕ್ಷಿ...