Posts

Showing posts from July 13, 2025

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

Image
  (ಸಿಸ್ಟೀನ್ ಚಾಪೆಲ್ ಛಾವಣಿಯಲ್ಲಿ ರಚಿಸಲಾಗಿರುವ ಮೈಕೆಲ್ಯಾಂಜೆಲೊ ಅವರ ಪ್ರವಾದಿ ಯೆರೆಮೀಯ)   ಯೆರೆಮೀಯನನ್ನು "ಅಳುವ ಪ್ರವಾದಿ ( weeping prophet )" ಎಂದು ಕರೆಯಲಾಗುತ್ತಿತ್ತು. ಆದರೆ, ಅದಕ್ಕಿಂತಲೂ ಮಿಗಿಲಾಗಿ, ಯೆರೆಮೀಯನದ್ದು ಪ್ರಾರ್ಥಿಸುವ ಪ್ರವಾದಿಯಾಗಿ ಎದ್ದು ಕಾಣುವ ವ್ಯಕ್ತಿತ್ವ. ಅವನ ಪ್ರಾರ್ಥನೆಗಳು, ಆಳವಾದ ವೇದನೆ, ಕರುಣೆಗಾಗಿ ಹಂಬಲ ಮತ್ತು ಅಚಲ ವಿಶ್ವಾಸದಿಂದ ತುಂಬಿರುವುದನ್ನು ಕಾಣಬಹುದು, ಅವು ದೇವರೊಂದಿಗಿನ ಅವನ ನಿಕಟ ಬಾಂದವ್ಯವನ್ನು ಪ್ರತಿಬಿಂಬಿಸುತ್ತವೆ. ಯೆರೆಮೀಯನ ಗ್ರಂಥದಾದ್ಯಂತ, ಅವನ ಪ್ರಾರ್ಥನೆಗಳು ಹೃತ್ಪೂರ್ವಕ ಪ್ರಲಾಪಗಳಿಂದ ಹಿಡಿದು ಉತ್ಸಾಹಭರಿತ ಮಧ್ಯಸ್ಥಿಕೆಗಳವರೆಗೆ ಇವೆ. ಯೆರೆಮೀಯನ ಪ್ರಾರ್ಥನೆಗಳು ಅವನ ವೈಯಕ್ತಿಕ ತೊಳಲಾಟಗಳು ಮತ್ತು ಜೂಡಾದ ಜನರಿಗಾಗಿ ಅವನು ಹೊತ್ತ ಹೊರೆ ಇದನ್ನು ಬಹಿರಂಗಪಡಿಸುತ್ತವೆ. ಅವನು ಆ ಜನರ ಪರವಾಗಿ ದೇವರಲ್ಲಿ ಬೇಡಿಕೊಂಡನು, ಅವರ ಪಾಪಕ್ಕಾಗಿ ದುಃಖಪಟ್ಟನು ಮತ್ತು ದೇವರ ಹಸ್ತಕ್ಷೇಪಕ್ಕಾಗಿ ಬಯಸಿದನು. ಅವನ ಪಶ್ಚಾತ್ತಾಪ ಮತ್ತು ಹತಾಶೆಯ ವಿಖ್ಯಾಪನೆಗಳು ಅವನ ಮೃದು ಹೃದಯವನ್ನು ತೋರಿಸುತ್ತವೆ, ಹಾಗೂ ಅವು ಯಾವಾಗಲೂ ದೇವರ ಶಕ್ತಿ ಮತ್ತು ಅವರ ಸಾರ್ವಭೌಮತ್ವದಲ್ಲಿ ಅವನಿಗಿದ್ದ ವಿಶ್ವಾಸದ ಅಭಿವ್ಯಕ್ತಿಯೊಂದಿಗೆ ಕೊನೆಗೊಳ್ಳುತ್ತವೆ. ಯೆರೆಮೀಯನ ಪ್ರಾರ್ಥನೆಗಳ ಗಮನಾರ್ಹ ಅಂಶವೆಂದರೆ ಅವುಗಳಲ್ಲಿ ಕಂಡುಬರುವ ನಿರ್ಮಲ ಪ್ರಾಮಾಣಿಕತೆ. ಅವನು ದೇವರ ನ್ಯಾಯವನ್ನು ಪ್ರಶ...