Posts

Showing posts with the label ಯೆರೆಮಿಯನ ಗ್ರಂಥ; ಅವನ ಆರು ವಿಖ್ಯಾಪನೆಗಳ ಪರಿಚಯ; ಯೆರೆಮಿಯನ ಪರಿಚಯ

ಯೆರೆಮಿಯನ ಗ್ರಂಥದ ಮತ್ತು ಅವನ ಆರು ವಿಖ್ಯಾಪನೆಗಳ ಪರಿಚಯ

Image
ಪ್ರವಾದಿ ಯೆರೆಮಿಯನ ಗ್ರಂಥದಲ್ಲಿ ಯೆರೆಮಿಯನ ವಿವರವಾದ ಜೀವನಚರಿತ್ರೆಯನ್ನು ಕಾಣುತ್ತೇವೆ, ಇದು ಹಳೆಯ ಒಡಂಬಡಿಕೆಯ ಪ್ರವಾದಿಗಳ ಆಂತರಿಕ ಜೀವನವನ್ನು ನೋಡಲು ಕೂಡ ನಮಗೆ ಹೆಚ್ಚಿನ ಸಹಾಯ ನೀ ಡುತ್ತದೆ. ಮಾತ್ರವಲ್ಲ, ಜೂಡಾದ ಅಂತಿಮ ದಿನಗಳ ಮತ್ತು ಜೆರುಸಲೆಮ್ ಪತನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ತಿಳಿದಿರುವ ಹೆಚ್ಚಿನ ವಿಚಾರಗಳು ಯೆರೆಮಿಯನ ಗ್ರಂಥದಿಂ ದಲೇ ನಮಗೆ  ತಿಳಿದು ಬರುತ್ತದೆ . ಯೆರೆಮಿಯನ ಗ್ರಂಥ ನಮಗೆ ಒಬ್ಬ ವಾಗ್ಮಿಯನ್ನು, ದೇವರೊಂದಿಗಿನ ಸಂಬಂಧದಲ್ಲಿ ಸೂಕ್ಷ್ಮತೆಯನ್ನು ಹೊಂದಿದ್ದ ವ್ಯಕ್ತಿಯನ್ನು ಮತ್ತು ಜೂಡಾದ ಜನರಿಗೆ ದೇವರ ಸಂದೇಶವನ್ನು ನಿರರ್ಗಳವಾಗಿ ಘೋಷಿಸುತ್ತಿದ್ದ ವ್ಯಕ್ತಿಯನ್ನು  ಪರಿಚಯಿಸುತ್ತದೆ. ಇಸ್ರಯೇಲ್‌ ರಾಷ್ಟ್ರದ ನಿರ್ಣಾಯಕ ಹಾಗೂ ಬಹು ಮುಖ್ಯವಾದ ಸಮಯದಲ್ಲಿ ದಕ್ಷಿಣ ದಲ್ಲಿದ್ದ ಜೂಡಾ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಯೆರೆಮಿಯನನ್ನು ದೇವರು ಕರೆದರು. ಸುಮಾರು ಅರ್ಧ ಶತಮಾನ, ಆ ದಂಗೆಕೋರ ಜನರಿಗೆ ಯೆರೆಮಿಯ ದೇವರ ವಾಕ್ಯವನ್ನು ಸಾರಿದನು. ಪಶ್ಚಾತ್ತಾಪಪಡುವಂತೆ ಸಾರುತ್ತಿದ್ದ ಯೆರೆಮಿಯನ ಕೂಗಿಗೆ ಪ್ರತಿಯಾಗಿ, ರಾಜರು, ಪ್ರವಾದಿಗಳು, ಯಾಜಕರು ಮತ್ತು ಜೂಡಾದ ನಿವಾಸಿಗಳು ಅವನ ಮಾತನ್ನು ಕೇಳಲು ನಿರಾಕರಿಸಿದರು. ಜನರ ತಿರಸ್ಕಾರ ಎಷ್ಟಿತ್ತೆಂದರೆ , ಯೆರೆಮಿಯ ತಾನು ಒಬ್ಬ ಪ್ರವಾದಿಯೋ ಅಲ್ಲವೋ ಎಂಬ ಸಂಶಯದೊಡನೆ ತನ್ನ ಆಂತರ್ಯದಲ್ಲಿ ಹೋರಾಡುವಂತೆ ಮಾಡಿತ್ತು. ಯೆರೆಮಿಯ ಜೆರುಸಲೆಮಿನ ಉತ್ತರದಲ್ಲಿರುವ ಅ...