Posts

Showing posts from September, 2014

THE SIGNIFICANCE OF THE CROSS OF CHRIST

ಕ್ರಿಸ್ತನ ಶಿಲುಬೆ ಮತ್ತು ಅದರ ಮಹತ್ವ  (ಈ ನನ್ನ ಬರವಣಿಗೆ www.christinyou.net/pages/crosschrst.html ನಲ್ಲಿ ಕಂಡುಬಂದ ಜೇಮ್ಸ್ ಎ. ಫ್ಲವರ್ ರವರ "ದಿ ಕ್ರಾಸ್ ಆಫ್ ಕ್ರೈಸ್ಟ್" ಎಂಬ ಲೇಖನದಿಂದ ಸ್ಪೂರ್ತಿ ಪಡೆದದ್ದು). " ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ " (ಯೋವಾ ೧೫:೧೩). ಆನಂತರ ಸ್ವಲ್ಪ ಸಮಯದಲ್ಲೇ ಈ ಮಾತನ್ನು ಮಹಾಗುರುವು ಶತ್ರುಗಳ ಕೈಗೆ ಒಪ್ಪಿಸಿಕೊಡಲ್ಪಟ್ಟು ಶಿಲುಬೆ ಯಾತನೆಯನ್ನು ಅನುಭವಿಸಿ , ಮಡಿದು ಈಡೇರಿಸುವುದರಲ್ಲಿದ್ದರು. ಕ್ರಿಸ್ತನ ಶಿಲುಬೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ ಸಾಮಾನ್ಯ ಶಿಲುಬೆಯ ಬಗ್ಗೆ ತಿಳಿದುಕೊಳ್ಳೊಣ. ಗ್ರೀಕ್ ಭಾಷೆಯಲ್ಲಿ ಶಿಲುಬೆಯನ್ನು "ಸ್ತಾವ್ರುಸ್" ಅರ್ಥಾಥ್ ಮೊನಚಾದ , ಭೂಮಿಯಲ್ಲಿ ಹೂತು ನಿಲ್ಲಿಸಿರುವ ಮರದ ತುಂಡು , ಸಾಮಾನ್ಯವಾಗಿ ಬೇಲಿಗಳಿಗೆ ಉಪಯೋಗಿಸುವ ಮರದ ಕಂಬ. ಆನಂತರ ಇದೇ ಶಬ್ದವನ್ನು ಗ್ರೀಕ್ ಭಾಷೆಯಲ್ಲಿ ಮರಣದಂಡನೆಯನ್ನು ನೀಡಲು ಉಪಯೋಗಿಸುವ ಶಿಲುಬೆಗೆ ನೀಡಲಾಯಿತು. ಅನೇಕ ಬಾರಿ ಒಂದೇ ಕಂಬವನ್ನು ಶಿಲುಬೆಯಾಗಿ ಪ್ರಯೋಗಿಸಿದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ಬಹುವಾಗಿ ಉಪಯೋಗಿಸಿದ್ದು ಎರಡು ಮರಗಳನ್ನು ಅಡ್ಡವಾಗಿ ಬಳಸಿ ಇಂಗ್ಲೀಷ್ ನ ’ಎಕ್ಸ್’ (X)ಅಥವಾ ’ಟಿ’(T) ಅಥವಾ ’ವೈ’(Y) ಆಕಾರದಲ್ಲಿ ಬಳಸುತ್ತಿದ್ದುದು. ಈ ರೀತಿಯ ಕ್ರೂರ ಮರಣದಂಡನೆಯನ್ನು ಫೋಯಿನಿ...