Posts

Showing posts from July 11, 2025

“ಎಂತಹ ಮಹಾರಕ್ಷಣೆ” – ಹಿಬ್ರಿಯ 2:1–4 ರ ಒಂದು ಚಿಂತನೆ

Image
  ಮೂಲಪಠ್ಯ: ಹಿಬ್ರಿಯ 2:1-4 1 ಆದುದರಿಂದಲೇ , ಗೊತ್ತುಗುರಿಯಿಲ್ಲದೆ ಅಲೆಯದ ಹಾಗೆ ನಾವು ಕೇಳಿರುವ ವಿಷಯಗಳಿಗೆ ವಿಶೇಷ ಗಮನಕೊಡಬೇಕು. 2 ಏಕೆಂದರೆ , ದೇವದೂತರ ಮುಖಾಂತರ ನಮ್ಮ ಪೂರ್ವಜರಿಗೆ ನೀಡಲಾದ ಸಂದೇಶ ವಿಶ್ವಸನೀಯ ಎಂದು ಖಚಿತವಾದುದರಿಂದ , ಅದನ್ನು ಮೀರಿದ ಪ್ರತಿಯೊಂದು ಉಲ್ಲಂಘನೆ ಮತ್ತು ಅವಿಧೇಯತೆ ನ್ಯಾಯಸಮ್ಮತವಾಗಿ ಶಿಕ್ಷಾರ್ಹವಾಗಿದ್ದರೆ , 3 ಇಂಥ ಉತ್ಕೃಷ್ಟ ರಕ್ಷಣೆಯನ್ನು ಅಲಕ್ಷ್ಯ ಮಾಡಿದಲ್ಲಿ , ನಾವು ಶಿಕ್ಷೆಯಿಂದ ಹೇಗೆ ತಾನೆ ತಪ್ಪಿಸಿಕೊಳ್ಳಬಲ್ಲೆವು ? ಅದನ್ನು ಮೊತ್ತಮೊದಲು ಸಾರಿದವರು ಪ್ರಭುವೇ. ಅವರನ್ನು ಆಗ ಆಲಿಸಿದವರು ನಮಗೆ ಅದನ್ನು ಪ್ರಮಾಣೀಕರಿಸಿದ್ದಾರೆ. 4 ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ ಪವಿತ್ರಾತ್ಮರ ವರದಾನಗಳಿಂದಲೂ ದೇವರು ಅದಕ್ಕೆ ಸಾಕ್ಷಿನೀಡಿದ್ದಾರೆ.   ಪಠ್ಯದ ಹಿನ್ನಲೆ 1. ಕರ್ತೃ ಮತ್ತು ಅಭಿಗ್ರಾಹಿ: ಕಿರುಕುಳದಿಂದಾಗಿ ಯಹೂದಿ ಧರ್ಮಕ್ಕೆ ಮರಳಲು ಆಲೋಚಿಸುತ್ತಿದ್ದ ಯೆಹೂದಿ ಕ್ರೈಸ್ತರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿದೆ. ಲೇಖಕ ಆ ಜನರನ್ನು ದೇವದೂತರು, ಮೋಶೆ ಮತ್ತು ಹಳೆಯ ಒಡಂಬಡಿಕೆಗಿಂತ ಶ್ರೇಷ್ಠನಾದ ಕ್ರಿಸ್ತರಲ್ಲಿ ದೃಢವಾಗಿ ಉಳಿಯುವಂತೆ ಪ್ರೋತ್ಸಾಹಿಸುತ್ತಾರೆ. 2. ಹಿಬ್ರಿಯ 2:1 – 4 ರ ಸಂದರ್ಭ: ಈ ಭಾಗ ಇದರ ಹಿಂದಿನ ೧ನೇ ಅಧ್ಯಾಯವನ್ನು ಅನುಸರಿಸುತ್ತದೆ; ದೇವದೂತರೆ...