Posts

Showing posts from July 14, 2025

ಸಂತ ಅಂತೋಣಿಯವರ ನವೇನ ಪ್ರಾರ್ಥನೆ

Image
(ಪ್ರತಿ ಮಂಗಳವಾರ)   ಸಾಮಾನ್ಯ ಪ್ರಾರ್ಥನೆ ಓ ಅದ್ಭುತಶಾಲಿಯಾದ ಸಂತ ಅಂತೋಣಿಯವರೇ, ನಿಮ್ಮ ತೋಳುಗಳಲ್ಲಿರುವ ಬಾಲಯೇಸುವಿನ ಮತ್ತು ಪವಾಡಗಳನ್ನೆಸಗುವ ನಿಮ್ಮ ಶಕ್ತಿಯಿಂದಾಗಿ ನೀವು ಪ್ರಖ್ಯಾತರಾಗಿದ್ದೀರಿ, ನನ್ನ ಅಂತರಾಳದಿಂದ ಬೇಡುತ್ತಿರುವ ಈ ನನ್ನ ಕೋರಿಕೆಯನ್ನು ಪರಾಂಭರಿಸಿ ಈಡೇರಿಸುವಂತೆ ಅಂಗಲಾಚಿ ಬೇಡಿಕೊಳ್ಳುತ್ತೇನೆ. (ಕೋರಿಕೆಯನ್ನು ನಿವೇದಿಸುವುದು) ನಿರ್ಭಾಗ್ಯ ಪಾಪಿಗಳ ಮೇಲೆ ಕರುಣೆವುಳ್ಳವರಾಗಿದ್ದ ನೀವು, ನಿಮ್ಮನ್ನು ಪ್ರಾರ್ಥಿಸುತ್ತಿರುವ ಈ ಅಪಾತ್ರರನ್ನು ಆಲಿಸಿರಿ, ದೈನ್ಯದಿಂದ ಬೇಡುತ್ತಿರುವ ಈ ಕೋರಿಕೆಯನ್ನು ಈಡೇರಿಸಿ ದೇವರ ಮಹಿಮೆಯನ್ನು ಬೆಳಗಿರಿ. (ಕೋರಿಕೆಯನ್ನು ಮತ್ತೊಮ್ಮೆ ನಿವೇದಿಸುವುದು) ಪ್ರಭು ಕಲಿಸಿದ ಪ್ರಾರ್ಥನೆ ನಮೋ ಮರಿಯಾ ಪ್ರಾರ್ಥನೆ ಪಿತನಿಗೂ, ಸುತನಿಗೂ … ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ ಸಂತ ಅಂತೋಣಿಯವರ ನವೇನ ಪ್ರಾರ್ಥನೆ (ನವದಿನಗಳ ಎಡೆಬಿಡದ ಪ್ರಾರ್ಥನೆ) ದಿನ ಒಂದು ಓ ಪರಿಶುದ್ಧ ಸಂತ ಅಂತೋಣಿಯವರೇ, ಸೃಷ್ಟಿಯ ಎಲ್ಲವನ್ನೂ-ಎಲ್ಲರನ್ನೂ ನೀವು ಬಹಳವಾಗಿ ಪ್ರೀತಿಸುತ್ತೀರಿ. ಆದುದರಿಂದಲೇ, ನೀವು ಕಷ್ಟಪಡುವ, ನೋವಿನಲ್ಲಿ ಸೋತಿಹ ಮತ್ತು ನಿಮ್ಮಲ್ಲಿ ಬೇಡುವ ಎಲ್ಲರಿಗಾಗಿ ದೇವರಿಂದ ಪವಾಡಗಳನ್ನೆಸಗಿ ವರಪ್ರಸಾದಗಳನ್ನು ಪಡೆದುಕೊಡುತ್ತೀರಿ. ಈ ವಿಶ್ವಾಸದಿಂದಲೇ ನಾನು ನಿಮ್ಮ ಬಳಿ ಸಹಾಯಕ್ಕಾಗಿ ಅಂಗಲಾಚಿ ಬಂದಿದ್ದೇನೆ, ನನ್ನ ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು...

ಸಂತ ಜೋಸೆಫರ ನವೇನ ಪ್ರಾರ್ಥನೆ

Image
  (ಪ್ರತಿ ಬುಧವಾರ) ಸಂತ ಜೋಸೆಫರಲ್ಲಿ ವಿಶ್ವಾಸ ನಿವೇದನೆ ಓ ಸಂತ ಜೋಸೆಫರೇ, ಯೇಸು ಕ್ರಿಸ್ತರ ವಿಶ್ವಾಸಕ್ಕೆ ಪಾತ್ರರೇ, ನಮ್ಮ ಹೃದಯವನ್ನು  ನಿಮ್ಮೆಡೆಗೆ  ಎತ್ತಿದ್ದೇವೆ. ನಿಮ್ಮ ಮಧ್ಯಸ್ಥಿಕೆಯ ಮತ್ತು ನಿಮ್ಮ ಪ್ರಬಲ ಬಿನ್ನಹದ ಮೂಲಕ, ವಿನಮ್ರ ಹೃದಯದ ಯೇಸು ಪ್ರಭು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಎಲ್ಲಾ ಕೃಪೆಗಳನ್ನೂ ದಯಪಾಲಿಸುವಂತೆ, ಮಾತ್ರವಲ್ಲ, ಈ ಭೂಲೋಕ ಬಾಳಿಗೆ ಬೇಕಾದ ಎಲ್ಲಾ ಅವಶ್ಯಕ ಅನುಗ್ರಹಗಳನ್ನೂ ಅಂತಿಮವಾಗಿ, ಸುಖವಾದ ಮರಣವನ್ನೂ ಪಡೆಯುವಂತೆ ನಮಗಾಗಿ ಪ್ರಾರ್ಥಿಸಿರಿ. ಮನುಷ್ಯರಾದ ದಿವ್ಯ ವಾರ್ತೆಯ ಕಾವಲರೇ, ನಮ್ಮ ಪರವಾಗಿ ನೀವು ಮಾಡುವ ಬಿನ್ನಹಗಳು ದೇವರ ಸನ್ನಿಧಿಗೆ ಏರುತ್ತದೆ ಎಂದು ದೃಢವಾಗಿ ನಂಬುತ್ತೇವೆ. ಮಹಾಪುರುಷ ಸಂತ ಜೋಸೆಫರೇ, ಪ್ರಭು ಕ್ರಿಸ್ತರ ಮೇಲೆ ನಿಮಗಿರುವ ಪ್ರೀತಿ ಮತ್ತು ಕ್ರಿಸ್ತರ ನಾಮ ಮಹಿಮೆಗಾಗಿ,  ನಮ್ಮ ಮನವಿಯನ್ನು ಆಲಿಸಿ, ಪಡೆದುಕೊಡಿರಿ (ಏಳು ಬಾರಿ ಪುನರಾವರ್ತಿಸುವುದು) ಪ್ರಾರ್ಥಿಸೋಣ ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು...

ಯೇಸು ಬಾಲರ ನವೇನ ಪ್ರಾರ್ಥನೆ

Image
  ನವೇನ ಪ್ರಾರ್ಥನೆ (9 ದಿನಗಳ ಎಡೆಬಿಡದ ಪ್ರಾರ್ಥನೆ) ಅದ್ಬುತಶಾಲಿಯಾದ ಬಾಲ ಯೇಸುವೇ, ನಿಮ್ಮ ಸ್ವರೂಪದ ಮುಂದೆ ಸಾಷ್ಟಾಂಗವೆರಗುತ್ತೇವೆ ಮತ್ತು ಸಂಕಷ್ಟದಲ್ಲಿ ಸಿಲುಕಿರುವ ನಮ್ಮ ಹೃದಯದ ಮೇಲೆ ಕಟಾಕ್ಷಿಸುವಂತೆ ಬೇಡಿಕೊಳ್ಳುತ್ತೇವೆ. ನಿಮ್ಮ ದಯಾಭರಿತ ಕೋಮಲವಾದ ಹೃದಯ ನಮ್ಮ ಪ್ರಾರ್ಥನೆಗಳಿಂದ ಮೃದುವಾಗಿ ನಾವು ಕೇಳುತ್ತಿರುವ ಕೋರಿಕೆಗಳನ್ನು ಅನುಗ್ರಹಿಸುವಂತಾಗಲಿ. [ಕೋರಿಕೆಗಳನ್ನು ನಿವೇದಿಸುವುದು] ನಾವು ಹೊತ್ತು ಬಳಲಿರುವ ಈ ನಿರಾಸೆಗಳನ್ನು, ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ನಿಮಗೊಪ್ಪಿಸುತ್ತೇವೆ. ನಿಮ್ಮ ಪರಿಶುದ್ಧ ಬಾಲ್ಯದ ನಿಮಿತ್ತ ನಮ್ಮ ಪ್ರಾರ್ಥನೆಗಳನ್ನು ಆಲಿಸಿ ನಮಗೆ ಸಾಂತ್ವನವನ್ನೀಯಿರಿ, ಪಿತ ಮತ್ತು ಪವಿತ್ರಾತ್ಮರೊಂದಿಗೆ   ಎಂದೆಂದೂ ಜೀವಿಸುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್‍. ಕೃತಜ್ಞತಾ ಪ್ರಾರ್ಥನೆ ಓ ಉದಾರ ಹೃದಯದ ಬಾಲಯೇಸುವೇ, ನಿಮ್ಮ ಕರಗಳಿಂದ ಪಡೆದ ಎಲ್ಲಾ ಆಶೀರ್ವಾದಗಳಿಗಾಗಿ ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಲು ನಿಮ್ಮ ಪೂಜ್ಯ ಸ್ವರೂಪದೆದುರು ಮೊಣಕಾಲೂರಿದ್ದೇನೆ. ಪಿತ ಮತ್ತು ಪವಿತ್ರಾತ್ಮರೊಂದಿಗೆ ನೀವು ನನ್ನ ಸೃಷ್ಟಿಕರ್ತರು ಮತ್ತು ರಕ್ಷಕರು ಎಂದು ವಿಶ್ವಾಸಿಸುತ್ತೇನೆ. ಇಂದಿನಿಂದ ನನ್ನೆಲ್ಲಾ ನಂಬಿಕೆಯನ್ನು ನಿಮ್ಮಲ್ಲಿರಿಸಿದ್ದೇನೆ. ನಿಮ್ಮ ಈ ಮಹಿಮಾ ಸ್ವರೂಪದಿಂದ ನಿಮ್ಮ ಮೇಲಿನ ಭಕ್ತಿಯು ವಿಶ್ವದೆಲ್ಲೆಡೆ ಹರಡಲಿ ಮತ್ತು ನಿಮ್ಮ ಬಾಲ್ಯದಲ್ಲಿ ವಿಶ್ವಾಸ ಹೆಚ್ಚಲಿ ಹಾಗೂ ಎಂ...

ನಿಷ್ಕಳಂಕ ಮಾತೆ ಮರಿಯಳ ನವೇನ ಪ್ರಾರ್ಥನೆ

Image
  (ಪ್ರತಿ ಶನಿವಾರದಂದು) ಪ್ರಾರಂಭ ಪ್ರಾರ್ಥನೆ ಮಹಾ ಪರಿಶುದ್ದ ನಿಷ್ಕಳಂಕ ಕನ್ನಿಕೆಯೇ, ನಮ್ಮೆಲ್ಲರ ತಾಯೇ, ಕನ್ಯಾಮರಿಯಮ್ಮನವರೇ, ನಮ್ಮ ಎಡೆಬಿಡದ ಸಹಾಯವೂ, ನಮ್ಮ ಆಶ್ರಯವೂ, ನಮ್ಮ ನಂಬಿಕೆಯೂ ನೀವೇ. ನೀವು ನಮಗೆ ಪಡೆದುಕೊಟ್ಟಿರುವ ಸಕಲ ವರಗಳಿಗಾಗಿ ದೇವರಿಗೆ ವಂದನೆಗಳನ್ನು ಸಲ್ಲಿಸುತ್ತೇವೆ. ನಾವು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತೇವೆ. ನಮ್ಮ ಪ್ರೀತಿಯನ್ನು ತೋರಲು ಎಂದೆಂದಿಗೂ ನಿಮಗೆ ಸೇವೆ ಮಾಡುತ್ತೇವೆಂದೂ, ಸಕಲರನ್ನೂ ನಿಮ್ಮ ಬಳಿಗೆ ಕರೆತರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆಂದೂ ವಾಗ್ದಾನ ಮಾಡುತ್ತೇವೆ. ನಮ್ಮ ದಿನನಿತ್ಯದ ಕಷ್ಟಕಾರ್ಪಣ್ಯಗಳು ನಮ್ಮನ್ನು ಖಿನ್ನರನ್ನಾಗಿ ಮಾಡುತ್ತಿವೆ. ನಮ್ಮ ಅಪಜಯಗಳೂ ಸಂಕಟಕರವಾದ ಸ್ವಂತ ವಿಷಯಗಳೂ ನಮ್ಮ ಜೀವನದಲ್ಲಿ ಜಿಗುಪ್ಸೆಯನ್ನು ತರುತ್ತಿವೆ. ನಮ್ಮ ಮೇಲೆ ಮರುಕವಾಗಿರಿ. ಓ ಕರುಣಾಭರಿತ ತಾಯೇ, ನಮ್ಮ ಅವಶ್ಯಕತೆಗಳನ್ನು ಗಮನಿಸಿ. ಕಷ್ಟಗಳಿಂದ ಪಾರುಮಾಡಿ ಅಥವಾ ದೇವರ ಚಿತ್ತದಂತೆ ಈ ಕಷ್ಟಗಳು ನಮ್ಮ ಆತ್ಮ ಪರಿಶುದ್ದತೆಗಾಗಿದ್ದಲ್ಲಿ ಅವುಗಳನ್ನು ಎದುರಿಸುವ ತಾಳ್ಮೆಯನ್ನೂ, ಧೈರ್ಯವನ್ನೂ ಪಡೆದುಕೊಡಿರಿ. ಈ ವರಪ್ರಸಾದಗಳನ್ನು ನಾವು ನಿಮ್ಮಿಂದ ಕೇಳುತ್ತಿರುವುದು ನಮ್ಮ ಯೋಗ್ಯತೆಯ ಪುಣ್ಯದಿಂದಲ್ಲ, ಆದರೆ, ನಿಮ್ಮ ಪ್ರೀತಿ ಮತ್ತು ಶಕ್ತಿಯ ಕೃಪೆಯಿಂದ ಕೇಳುತ್ತಿದ್ದೇವೆ. ನಾವು ನಿಮ್ಮ ಶಕ್ತಿಪೂರಿತವಾದ ನಾಮವನ್ನು ಕೂಗಿ ಕರೆಯುತ್ತಿದ್ದೇವೆ. ಜೀವಿತರ ಸಂರಕ್ಷಕರೂ, ಮರಣದ ಅವಧಿಯಲ್ಲಿರುವವರಿಗ...

ಯೇಸುವಿನ ಪವಿತ್ರ ಹೃದಯಕ್ಕೆ ಪ್ರಾರ್ಥನೆ

Image
  ಯೇಸುವಿನ ಪವಿತ್ರ ಹೃದಯಕ್ಕೆ ಮನುಕುಲವನ್ನು ಅರ್ಪಿಸುವ ಪ್ರಾರ್ಥನೆ (ಪ್ರತಿ ಶುಕ್ರವಾರ) ಮನುಕುಲದ ರಕ್ಷಕರಾಗಿರುವ ಮಧುರವಾದ ಯೇಸುವೇ, ಇಗೋ ನಿಮ್ಮ ದಿವ್ಯ ಪೀಠದ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದಿರುವ ನಮ್ಮನ್ನು ಈಕ್ಷಿಸಿರಿ ಸ್ವಾಮಿ. ನಾವು ನಿಮ್ಮವರಾಗಿರುತ್ತೇವೆ ಮತ್ತು ಯಾವಾಗಲೂ ನಿಮ್ಮವರಾಗಿರಲೂ ಆಶಿಸುತ್ತೇವೆ. ಆದರೂ, ನಾವು ನಿಮ್ಮೊಂದಿಗೆ ಅಧಿಕ ಐಕ್ಯವುಳ್ಳವರಾಗಿರುವ ಹಾಗೆ, ಇಗೋ, ನಾವು ಒಬ್ಬೊಬ್ಬರು ನಮ್ಮನ್ನು ಈ ದಿನ ಮನಃಪೂರ್ವಕವಾಗಿ ನಿಮ್ಮ ದಿವ್ಯ ಹೃದಯಕ್ಕೆ ಒಪ್ಪಿಸಿಕೊಡುತ್ತೇವೆ. ಯಥಾರ್ಥವಾಗಿ ಅನೇಕರು ನಿಮ್ಮನ್ನು ಎಂದಿಗೂ ಅರಿತುಕೊಳ್ಳಲೇ ಇಲ್ಲ. ಅನೇಕರು ನಿಮ್ಮ ಆಜ್ಞೆಗಳನ್ನು ತೃಣೀಕರಿಸುವುದಲ್ಲದೇ ನಿಮ್ಮನ್ನು ತ್ಯಜಿಸಿಬಿಟ್ಟಿದ್ದಾರೆ. ಮಹಾಮರುಕವುಳ್ಳ ಯೇಸುವೇ, ಅಂತಹವರ ಮೇಲೆ ನಿಮ್ಮ ದಯೆಯನ್ನು ತೋರಿ ನಿಮ್ಮ ದಿವ್ಯ ಹೃದಯದೆಡೆಗೆ ಅವರನ್ನು ಸೇರಿಸಿಕೊಳ್ಳಿರಿ. ಓ ಪ್ರಭುವೇ, ನಿಮ್ಮನ್ನು ಎಂದಿಗೂ ಅಗಲಿಹೋಗದೇ ಪ್ರಾಮಾಣಿಕವಾಗಿ ಇರುವವರಿಗೆ ಮಾತ್ರವಲ್ಲ, ನಿಮ್ಮನ್ನು ಬಿಟ್ಟು ಬೇಡವೆಂದು ತ್ಯಜಿಸಿಹೋದ ಜನರಿಗೂ ಅರಸರಾಗಿರಿ. ಇವರು ಬಡತನದಿಂದಲೂ ಹಸಿವಿನಿಂದಲೂ ಸಾಯದಂತೆ ತಮ್ಮ ತಂದೆಯ ಮನೆಗೆ ಶೀಘ್ರವಾಗಿ ಹಿಂದಿರುವಂತೆ ಮಾಡಿರಿ. ಅಬದ್ದವಾದ ಅಸತ್ಯದಿಂದ ವಂಚಿಸಲ್ಪಟ್ಟವರಿಗೂ, ವೈಮನಸ್ಸಿನಿಂದ ಅಗಲಿ ದೂರಹೋಗಿರುವವರಿಗೂ ರಾಜರಾಗಿರಿ. ಸ್ವಲ್ಪ ಕಾಲದಲ್ಲಿ ಒಂದೇ ಮಂದೆಯೂ ಒಬ್ಬರೇ ಮೇಷಪಾಲಕರೂ ಇರುವಂತೆ ನಿಮ್ಮ ಸತ್ಯದ ಏಕ ವಿಶ್...