Posts

Showing posts with the label ಸಂತ ಅಂತೋಣಿಯವರ ನವೇನ ಪ್ರಾರ್ಥನೆ

ಸಂತ ಅಂತೋಣಿಯವರ ನವೇನ ಪ್ರಾರ್ಥನೆ

Image
(ಪ್ರತಿ ಮಂಗಳವಾರ)   ಸಾಮಾನ್ಯ ಪ್ರಾರ್ಥನೆ ಓ ಅದ್ಭುತಶಾಲಿಯಾದ ಸಂತ ಅಂತೋಣಿಯವರೇ, ನಿಮ್ಮ ತೋಳುಗಳಲ್ಲಿರುವ ಬಾಲಯೇಸುವಿನ ಮತ್ತು ಪವಾಡಗಳನ್ನೆಸಗುವ ನಿಮ್ಮ ಶಕ್ತಿಯಿಂದಾಗಿ ನೀವು ಪ್ರಖ್ಯಾತರಾಗಿದ್ದೀರಿ, ನನ್ನ ಅಂತರಾಳದಿಂದ ಬೇಡುತ್ತಿರುವ ಈ ನನ್ನ ಕೋರಿಕೆಯನ್ನು ಪರಾಂಭರಿಸಿ ಈಡೇರಿಸುವಂತೆ ಅಂಗಲಾಚಿ ಬೇಡಿಕೊಳ್ಳುತ್ತೇನೆ. (ಕೋರಿಕೆಯನ್ನು ನಿವೇದಿಸುವುದು) ನಿರ್ಭಾಗ್ಯ ಪಾಪಿಗಳ ಮೇಲೆ ಕರುಣೆವುಳ್ಳವರಾಗಿದ್ದ ನೀವು, ನಿಮ್ಮನ್ನು ಪ್ರಾರ್ಥಿಸುತ್ತಿರುವ ಈ ಅಪಾತ್ರರನ್ನು ಆಲಿಸಿರಿ, ದೈನ್ಯದಿಂದ ಬೇಡುತ್ತಿರುವ ಈ ಕೋರಿಕೆಯನ್ನು ಈಡೇರಿಸಿ ದೇವರ ಮಹಿಮೆಯನ್ನು ಬೆಳಗಿರಿ. (ಕೋರಿಕೆಯನ್ನು ಮತ್ತೊಮ್ಮೆ ನಿವೇದಿಸುವುದು) ಪ್ರಭು ಕಲಿಸಿದ ಪ್ರಾರ್ಥನೆ ನಮೋ ಮರಿಯಾ ಪ್ರಾರ್ಥನೆ ಪಿತನಿಗೂ, ಸುತನಿಗೂ … ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ ಸಂತ ಅಂತೋಣಿಯವರ ನವೇನ ಪ್ರಾರ್ಥನೆ (ನವದಿನಗಳ ಎಡೆಬಿಡದ ಪ್ರಾರ್ಥನೆ) ದಿನ ಒಂದು ಓ ಪರಿಶುದ್ಧ ಸಂತ ಅಂತೋಣಿಯವರೇ, ಸೃಷ್ಟಿಯ ಎಲ್ಲವನ್ನೂ-ಎಲ್ಲರನ್ನೂ ನೀವು ಬಹಳವಾಗಿ ಪ್ರೀತಿಸುತ್ತೀರಿ. ಆದುದರಿಂದಲೇ, ನೀವು ಕಷ್ಟಪಡುವ, ನೋವಿನಲ್ಲಿ ಸೋತಿಹ ಮತ್ತು ನಿಮ್ಮಲ್ಲಿ ಬೇಡುವ ಎಲ್ಲರಿಗಾಗಿ ದೇವರಿಂದ ಪವಾಡಗಳನ್ನೆಸಗಿ ವರಪ್ರಸಾದಗಳನ್ನು ಪಡೆದುಕೊಡುತ್ತೀರಿ. ಈ ವಿಶ್ವಾಸದಿಂದಲೇ ನಾನು ನಿಮ್ಮ ಬಳಿ ಸಹಾಯಕ್ಕಾಗಿ ಅಂಗಲಾಚಿ ಬಂದಿದ್ದೇನೆ, ನನ್ನ ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು...