Posts

Showing posts with the label ಕಥೋಲಿಕ ಪ್ರಾರ್ಥನೆಗಳು

ಅನುದಿನ ಪ್ರಾರ್ಥನೆಗಳು

Image
ಬೆಳಗಿನ ಪ್ರಾರ್ಥನೆಗಳು ಶಿಲುಬೆಯ   ಗುರುತು ಪವಿತ್ರ ಶಿಲುಬೆಯ ಗುರುತಿನ ಮೂಲಕ ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿರಿ. ನಮ್ಮ ಸರ್ವೇಶ್ವರ , ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಆಮೆನ್‍. ಪರಮತ್ರಿತ್ವ   ಸ್ತೋತ್ರ ಪಿತನಿಗೂ ಮತ್ತು ಸುತನಿಗೂ ಮತ್ತು ಪವಿತ್ರಾತ್ಮರಿಗೂ ಸ್ತೋತ್ರವಾಗಲಿ ಆದಿಯಲ್ಲಿದ್ದ ಹಾಗೆಯೇ , ಈಗಲೂ ಸದಾಕಾಲಕ್ಕೂ ಆಮೆನ್. ಪ್ರಭು ಕಲಿಸಿದ ಪ್ರಾರ್ಥನೆ ಸ್ವರ್ಗದಲ್ಲಿರುವ ನಮ್ಮ ತಂದೆಯೇ , ನಿಮ್ಮ ನಾಮ ಪೂಜಿತವಾಗಲಿ ನಿಮ್ಮ ರಾಜ್ಯ ಬರಲಿ ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವಂತೆಯೇ ಭುವಿಯಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ ನೀಡಿರಿ. ನಮಗೆ ತಪ್ಪು ಮಾಡಿದವರನ್ನು   ನಾವು  ಕ್ಷಮಿಸುವ ಪ್ರಕಾರ  ನಮ್ಮ ಪಾಪಗಳನ್ನು ಕ್ಷಮಿಸಿರಿ ನಮ್ಮನ್ನು ಶೋಧನೆಗೆ ಒಳಪಡಿಸದೆ ಕೇಡಿನಿಂದ ನಮ್ಮನ್ನು ರಕ್ಷಿಸಿರಿ. ಆಮೆನ್. ನಮೋ   ಮರಿಯ   ಪ್ರಾರ್ಥನೆ ನಮೋ ಮರಿಯಾ ಕೃಪಾ ಪೂರ್ಣೆಯೇ ಪ್ರಭು ನಿಮ್ಮೊಡನೆ ಇದ್ದಾರೆ ಸ್ತ್ರೀಯರಲ್ಲಿ ನೀವು ಧನ್ಯರು ಮತ್ತು ನಿಮ್ಮ ಉದರದ ಫಲವಾದ ಯೇಸುವೂ ಧನ್ಯರು. ಸಂತ ಮರಿಯ ದೇವ ಮಾತೆಯೇ ಪಾಪಿಗಳಾಗಿರುವ ನಮಗಾಗಿ ಈಗಲೂ ನಮ್ಮ ಮರಣದ ಸಮಯದಲ್ಲೂ ಪ್ರಾರ್ಥಿಸಿರಿ , ಆಮೆನ್. ತ್ರಿಕಾಲ   ಪ್ರಾರ್ಥನೆ ಪ್ರಭುವಿನ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು ...