ಸಂತ ಜೋಸೆಫರ ನವೇನ ಪ್ರಾರ್ಥನೆ
(ಪ್ರತಿ ಬುಧವಾರ) ಸಂತ ಜೋಸೆಫರಲ್ಲಿ ವಿಶ್ವಾಸ ನಿವೇದನೆ ಓ ಸಂತ ಜೋಸೆಫರೇ, ಯೇಸು ಕ್ರಿಸ್ತರ ವಿಶ್ವಾಸಕ್ಕೆ ಪಾತ್ರರೇ, ನಮ್ಮ ಹೃದಯವನ್ನು ನಿಮ್ಮೆಡೆಗೆ ಎತ್ತಿದ್ದೇವೆ. ನಿಮ್ಮ ಮಧ್ಯಸ್ಥಿಕೆಯ ಮತ್ತು ನಿಮ್ಮ ಪ್ರಬಲ ಬಿನ್ನಹದ ಮೂಲಕ, ವಿನಮ್ರ ಹೃದಯದ ಯೇಸು ಪ್ರಭು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಎಲ್ಲಾ ಕೃಪೆಗಳನ್ನೂ ದಯಪಾಲಿಸುವಂತೆ, ಮಾತ್ರವಲ್ಲ, ಈ ಭೂಲೋಕ ಬಾಳಿಗೆ ಬೇಕಾದ ಎಲ್ಲಾ ಅವಶ್ಯಕ ಅನುಗ್ರಹಗಳನ್ನೂ ಅಂತಿಮವಾಗಿ, ಸುಖವಾದ ಮರಣವನ್ನೂ ಪಡೆಯುವಂತೆ ನಮಗಾಗಿ ಪ್ರಾರ್ಥಿಸಿರಿ. ಮನುಷ್ಯರಾದ ದಿವ್ಯ ವಾರ್ತೆಯ ಕಾವಲರೇ, ನಮ್ಮ ಪರವಾಗಿ ನೀವು ಮಾಡುವ ಬಿನ್ನಹಗಳು ದೇವರ ಸನ್ನಿಧಿಗೆ ಏರುತ್ತದೆ ಎಂದು ದೃಢವಾಗಿ ನಂಬುತ್ತೇವೆ. ಮಹಾಪುರುಷ ಸಂತ ಜೋಸೆಫರೇ, ಪ್ರಭು ಕ್ರಿಸ್ತರ ಮೇಲೆ ನಿಮಗಿರುವ ಪ್ರೀತಿ ಮತ್ತು ಕ್ರಿಸ್ತರ ನಾಮ ಮಹಿಮೆಗಾಗಿ, ನಮ್ಮ ಮನವಿಯನ್ನು ಆಲಿಸಿ, ಪಡೆದುಕೊಡಿರಿ (ಏಳು ಬಾರಿ ಪುನರಾವರ್ತಿಸುವುದು) ಪ್ರಾರ್ಥಿಸೋಣ ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು...