Posts

Showing posts from July, 2025

ಯೆರೆಮಿಯನ ಎರಡನೇ ವಿಖ್ಯಾಪನೆ - 12:1–6

Image
  ಪಠ್ಯ : ಯೆರೆಮಿಯ 12:1–6 1  ಸರ್ವೇಶ್ವರಾ , ನೀವು ಸತ್ಯಸ್ವರೂಪಿ . ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ . ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ ? 2  ಅವರನ್ನು ನಾಟಿಮಾಡಿದವರು ನೀವು ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು . ನೀವು ಅವರ ಅಧರಕ್ಕೆ ಹತ್ತಿರ , ಹೃದಯಕ್ಕೆ ದೂರ . 3  ಸರ್ವೇಶ್ವರಾ , ನನ್ನ ಪರಿಚಯ ನಿಮಗಿದೆ, ನಿಮ್ಮ ನೋಟ ನನ್ನ ಮೇಲಿದೆ . ನನ್ನ ಹೃದಯ ನಿಮ್ಮೊಂದಿಗಿದೆ , ಇದರ ಪರೀಕ್ಷೆ ನಿಮ್ಮಿಂದಾಗಿದೆ . ಅವರನ್ನೋ , ಕುರಿಗಳೋ ಎಂಬಂತೆ ಕೊಲೆಗೆ ಕರೆದೊಯ್ಯಿರಿ, ವಧ್ಯದಿವಸದವರೆಗೂ ಅವರನ್ನು ವಿಂಗಡಿಸಿಡಿ . 4  ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು ? ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲು ಸೊಪ್ಪು ಒಣಗಿರಬೇಕು ? ನಾಡಜನರ ನೀಚತನದ ನಿಮಿತ್ತ, ಮಾಯವಾಗಿವೆ ಪ್ರಾಣಪಕ್ಷಿಗಳು ಕೂಡ . ‘ ನಮ್ಮ ನಡತೆಯನ್ನು ಗಮನಿಸರು ದೇವರು ’ ಎಂದುಕೊಳ್ಳುತ್ತಿರುವರು ಆ ಜನರು . 5  ಆಗ ಸರ್ವೇಶ್ವರ ನನಗೆ : “ ಕಾಲಾಳುಗಳ ಸಂಗಡ ಓಡಲು ಆಯಾಸಗೊಂಡೆಯಾದರೆ, ಕುದುರೆಗಳೊಂದಿಗೆ ಓಡಿ ಹೇಗೆ ಹೋರಾಡುವೆ ? ಪ್ರಶಾಂತ ಪ್ರದೇಶದಲ್ಲಿ ನಿರ್ಭಯನಾಗಿ ನಿಲ್ಲಲಾರೆಯಾದರೆ, ...