ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)
ಯೆರೆಮಿಯ 11:18–23 ರಿಂದ " ಯೆರೆಮಿಯನ ವಿಖ್ಯಾಪನೆಗಳು " ( Confessions of Jeremiah ) ಪ್ರಾರಂಭವಾಗುತ್ತವೆ . ಇದರಲ್ಲಿ ಪ್ರವಾದಿ ಯೆರೆಮಿಯನ ವೈಯಕ್ತಿಕ ಪ್ರಾರ್ಥನೆಗಳು ಮತ್ತು ಅವನ ದೈವಿಕ ಕರೆಯನ್ನು ನಿರ್ವಹಿಸುವಾಗ ಅವನಲ್ಲಿ ಉಂಟಾಗುತ್ತಿದ್ದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಹೋರಾಟಗಳನ್ನು ಇಲ್ಲಿ ನಾವು ಕಾಣಬಹುದು . ಈ ವಿಖ್ಯಾಪನೆಗಳು ಬಹಳ ಹೃದಯಸ್ಪರ್ಶಿ ಮತ್ತು ಭಾವನಾಭರಿತ ಹಾಗೂ ಪ್ರವಾದನೆಯ ಜವಾಬ್ದಾರಿಯ ಹೊರೆ ಮತ್ತು ಯೆರೆಮಿಯನ ಮಾನವ ದುರ್ಬಲತೆಗಳನ್ನು ಬಹಿರಂಗಪಡಿಸುತ್ತವೆ . ಯೆರೆಮಿಯನ ಮೊದಲನೆಯ ವಿಖ್ಯಾಪನೆ, ನಂತರ ಮಾಡುವ ಎಲ್ಲ ವಿಖ್ಯಾಪನೆಗಳಿಗೆ ಪ್ರಾರಂಭವನ್ನು ಒದಗಿಸುತ್ತದೆ . ಪ್ರವಾದಿ ತನ್ನ ಕರೆ ಮತ್ತು ಅವನು ಇತರರಿಂದ ಎದುರಿಸುತ್ತಿರುವ ದ್ವೇಷ ಇವುಗಳೊಂದಿಗೆ ಹೋರಾಡುತ್ತಿರುವಂತೆಯೇ ಅದು ಇನ್ನೂ ಹೆಚ್ಚು ತೀವ್ರವಾಗುತ್ತದೆ . ಮೊದಲ ವಿಖ್ಯಾಪನೆಯಲ್ಲಿ , ಯೆರೆಮಿಯ ತನ್ನ ಸ್ವಂತ ಜನರಿಂದ , ವಿಶೇಷವಾಗಿ ತನ್ನ ಊರಾದ ಅನಾಥೋತಿನವರಿಂದ ದ್ರೋಹ ಮತ್ತು ಸಾವಿನ ಬೆದರಿಕೆಯನ್ನು ಎದುರಿಸುತ್ತಾನೆ . ಈ ಭಾಗದಲ್ಲಿ ನ್ಯಾಯಕ್ಕಾಗಿ ಅವನ ಕೂಗು ಮತ್ತು ದೇವರಲ್ಲಿ ಅವನ ಅಚಲ ವಿಶ್ವಾಸವನ್ನು ನಾವು ಕಾಣಬಹುದು . ಈ ವಿಖ್ಯಾಪನೆ ಮುಖ್ಯವಾದುದು , ಏಕೆಂದರೆ , ಇದು ಯೆರೆಮಿಯನ ವೈಯಕ್ತಿಕ ದುಃಖವನ್ನು ಸ್ಪಷ್ಟವಾಗಿ ತೋರಿಸುತ್ತದೆ...

ಅತ್ಯುತ್ತಮ ಲೇಖನ. ನೀವು ಓದುಗರಿಗೆ ತಿಳಿಸಬೇಕಾದ ಸಂಗತಿಗಳನ್ನು ಸಮ ಯೋಚಿತವಾಗಿ, ಸಂದರ್ಭಕ್ಕೆ ಅನುಗುಣವಾಗಿ, ಪಾಮರ ಪಂಡಿತರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಸಾಗರದಷ್ಟು ಇರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ಸಹೃದಯಿಗಳಿಗೆ ಸಮಯವನ್ನು ಸಂಬಂಧಗಳನ್ನು ಸರಿದೂಗಿಸುವಲ್ಲಿ , ದೈನಂದಿನ ವೈಯಕ್ತಿಕ, ಸಾಮಾಜಿಕ, ಆದ್ಯಾ ತ್ಮಿಕ ಕಾರ್ಯಗಳನ್ನು ನಿರ್ವಹಿಸುವಾಗ ಸದುಪಯೋಗ ಪಡಿಸುಕೊಂಡರೆ ಜೀವನದ ಸಾರ್ಥಕತೆಯನ್ನು ಸಾದಿಸಬಹುದೆಂಬ ವಿಚಾರವನ್ನು ತಿಳಿಸಿರುತ್ತೀರಿ. ಸಮಯವನ್ನು ಬಳಸುವುದರಲ್ಲಿ ಸಮತೋಲನ ಸಾಧಿಸುವುದರಿಂದ ಹೆಚ್ಚು ಯಶಸ್ಸು ದೊರೆಯುತ್ತದೆ ಎಂಬ ಸಾರವನ್ನು ಸಮರ್ಪಿಸಿರುವ ನನ್ನ ಪ್ರೀತಿಯ ಭಾವಮೈದುನ ರವಾರಾದ ಹಾಗೂ ಸಾಹಿತ್ಯ ಅನ್ವೇಷಣೆಗೆ ಪ್ರೇರಣೆಯಾದ ವಂದನೀಯ ಫಾದರ್ ವಿಜಯ್ ರಾಜ್ ರವರಿಗೆ ಅಭಿನಂದನೆಗಳು.
ReplyDelete